Wednesday, October 24, 2018

ಅಂಕಗಳ ಜಗತ್ತು!

ನೀನು ಹೆಚ್ಚಾಗಿ ಬಂದರೆ ಸಿಹಿ ಹಂಚುವವರಿದ್ದಾರೆ!
ಕಡಿಮೆ ಬಂದರೆ ಆತ್ಮಹತ್ಯೆ ಮಾಡಿಕೊಳ್ಳುವವರಿದ್ದಾರೆ!
ನಿನ್ನನ್ನು ಕಂಡರೆ ಭಯ ಪಡುವವರಿದ್ದಾರೆ!
ನಿನ್ನನ್ನು ಇಟ್ಟುಕೊಂಡು ಭಯಪಡಿಸುವವರಿದ್ದಾರೆ!
ನಿನ್ನನ್ನು ಬಳಸಿಕೊಂಡು ಮೋಸ ಮಾಡುವವರಿದ್ದಾರೆ!
ನೀನು ಇದ್ದರೆ ಮಾತ್ರ ಗೆಲುವು ಎಂದು ಸಾಧಿಸಿದವರಿದ್ದಾರೆ!
ನೀನು ಇರದಿದ್ದರೂ ಸಾಧಿಸುತ್ತೇವೆ ಎನ್ನುವವರಿದ್ದಾರೆ!
ವಿದ್ಯಾರ್ಥಿಗಳ ಪ್ರೀತಿಸುವುದು ನಿನ್ನನ್ನೇ!
ವಿದ್ಯಾರ್ಥಿಗಳು ದ್ವೇಷಿಸುವುದು ನಿನ್ನನ್ನೇ!
ವಿದ್ಯಾರ್ಥಿಗಳು ಬಯಸುವುದು ನಿನ್ನನ್ನೇ!
ವಿದ್ಯಾರ್ಥಿಗಳು ಬೈಯ್ಯುವುದು ನಿನ್ನನೇ!
ಒಬ್ಬರ ಭವಿಷ್ಯ ಉಜ್ವಲವಾದರೆ ಕೊಂಡಾಡುವರು ನಿನ್ನನ್ನೇ!
ಇನ್ನೊಬ್ಬರ ಭವಿಷ್ಯ ಹಾಳಾದರೆ ಕೆಂಡಕಾರುವುದು ನಿನ್ನನ್ನೇ!
ನಿನ್ನನ್ನು ಪಡೆಯುವುದು ಕಠಿಣ ಆದರೂ ಸುಲಭ!
"ನೀನೇ ಇಡೀ ಜಗತ್ತಲ್ಲ ಆದರೆ ಎಲ್ಲರ ತಲೆಯಲ್ಲಿ ನಿನ್ನದೇ ಒಂದು ಜಗತ್ತು ಜಗತ್ತು!"
ಶಿಕ್ಷಣವೆಂದ ತಕ್ಷಣ ನೆನಪಿಗೆ ಬರುವುದು ನೀನೆ!
ನೀನೇ ಅಂಕಗಳು ಬದಲಾಯಿಸು ನಿನ್ನ ಬಗ್ಗೆ ಇರುವ ವಿಚಾರಗಳು;!!
             ಇಂತಿ ನಿನ್ನ ಪ್ರೀತಿಯ ಜ್ಞಾನವಿದ್ದರೂ        
             ಅಂಕವನ್ನು ಪಡೆಯಲು ಹೋರಾಡುತ್ತಿರುವ
             ವಿದ್ಯಾರ್ಥಿಗಳು!
                                          

14 comments:

  1. This comment has been removed by the author.

    ReplyDelete
  2. Fantastic and more relevant to our so-called eduxeduca system

    ReplyDelete
  3. En maadodu ivaaga egina kaalada Jana ಅಂಕ ಪಡದವನನ್ನೇ ಛಲದ0ಕ ಅಂತಾರೆ....!!!

    ReplyDelete
  4. Replies
    1. ಆ ಛಲದಂಕರಲ್ಲಿ ಅಂಕವಿರುತ್ತೆ ಹೊರತು ಛಲವಿರುವುದಲ್ಲ..

      Delete

##coroNature : a Virus or a Vaccine !?!

                        ### coroNature..!! a VIRUS or a VACCINE..!! A virus that's.... Challenging every medical foundation; Affecting e...