Friday, December 28, 2018

ಹುಟ್ಟಿದ ಹಬ್ಬ.!

"ಹುಟ್ಟಿದ ದಿನ ದೂರವಾಗುವುದು ಹುಟ್ಟಿದ ವರ್ಷಕ್ಕೆ
ಸಮೀಪಿಸಿವುದು ಸಾವಿನ ದಿನಕ್ಕೆ"

"ಹುಟ್ಟಿ ಎಷ್ಟು ವರ್ಷಗಳಾಯ್ತು ಎನ್ನುವುದಕ್ಕಿಂತ,
ಎಷ್ಟು ಹರುಷಗಳಾಯ್ತು ಎಂಬುವುದು ಮುಖ್ಯ"

"ನಮ್ಮ ಹುಟ್ಟು ನಮ್ಮ ತಂದೆ ತಾಯಿಗೆ ಮಾತ್ರ ಗೊತ್ತಿರುತ್ತೆ
ಆದರೆ, ನಮ್ಮ ಸಾವು ಎಲ್ಲರ ತಂದೆ ತಾಯಿಗೆ ತಿಳಿಯಬೇಕು"

"ಹುಟ್ಟುವಾಗ ನಾವು ಮಾತ್ರ ಅಳುತ್ತೇವೆ
ಆದರೆ, ಸಾಯುವಾಗ ಈಡೀ ಜಗವೇ ಅಳಬೇಕು"..!

ಆಗ ಜೀವನವೇ ಸಾರ್ಥಕ..!

Friday, December 21, 2018

ಪರೀಕ್ಷೆಯ ದಿನದಂದು!

ಪರೀಕ್ಷೆಯ ದಿನದಂದು__;
"ನಾನು ತಿಳಿದಿದ್ದೆ ಪರೀಕ್ಷೆ ಸರಳ!
ತನ್ನ ಕೇಶರಾಶಿಯ ಹರಡಿಕೊಂಡು ಬಂದಳು ಅವಳು!
ಸರಳವಾಗಿದ್ದ ವಿಷಯಗಳೆಲ್ಲಾ ಆಗುತ್ತಾ ಹೋದವು ವಿರಳ!
ಆ ಕೋಲಾಹಲದಲ್ಲೂ ಏನೋ ಒಂಥರಾ ನಿರಾಳ!
ಇದೆಲ್ಲಾ ತಿಳಿದುಕೊಂಡವರು ಹೇಳುವರು ಇದು ಪ್ರೀತಿಯ ಹುರುಳ..!"

Saturday, December 15, 2018

ಚಹಾ ಆಹಾ!!!

"ಚಹಾ" ಎಂದೊಡನೆ...
ನನ್ನ ತುಟಿಗಳೆರಡು ಒಂದಕ್ಕೊಂದು ಮುತ್ತಿಕ್ಕುತ್ತವೇ!
ನಾಲಿಗೆ ಒಂದು ಬಾರಿ ತುಟಿಗಳ ನಡುವೆ ನುಗ್ಗಿ ಬರುತ್ತದೆ!
ಲಾವಾ ರಸ ಉಕ್ಕುವಂತೆ ಬಾಯಲ್ಲಿ ನೀರು ತುಂಬುತ್ತದೆ!
ಆಗ ಚಹಾ ಕುಡಿದರೆ...
ನಾಲಿಗೆ ಓಹೋ ಎಂದರೆ ಮನವು.. ಆಹ್ಹಾ ಎನ್ನುವುದು!!!
ಅಂತಾರಾಷ್ಟ್ರೀಯ ಚಹಾ ದಿನದ ಶುಭಾಶಯಗಳು..!

##coroNature : a Virus or a Vaccine !?!

                        ### coroNature..!! a VIRUS or a VACCINE..!! A virus that's.... Challenging every medical foundation; Affecting e...