ಪ್ರೀತಿ ಹೆಚ್ಚಾದರೆ ಕರೆಯುವವರು ಮಚಾ
ಕೋಪ ಬಂದರೆ ಕರೆಯುವವರು ಗುರು
'ಇಲ್ಲಿ ಜೀವನಕ್ಕೊಂದು ಭಾಷೆ ಕನ್ನಡ ಎನ್ನುವವರಿದ್ದಾರೆ'
"ನಮ್ಮ ಜೀವನವೇ ನಮ್ಮ ಭಾಷೆ ಕನ್ನಡ ಎನ್ನುವವರೂ ಇದ್ದಾರೆ"!
ಆದ ಕಾರಣವೇ ಎನ್ನಡ/ಎಕ್ಕಡ ಗಳ ನಡುವೆಯೂ ಎದ್ದು ಕಾಣುವುದು ನಮ್ಮ ಕನ್ನಡ!..
ನಮ್ಮ ನಾಡಿನ ಜಾಗದಲ್ಲಿಲ್ಲ ಸ್ವಾರ್ಥ
ನಮ್ಮ ನಾಡಿನ ಅನ್ನದಲ್ಲಿಲ್ಲ ಸ್ವಾರ್ಥ
ನಮ್ಮ ನಾಡಿನ ಪ್ರೀತಿಯಲ್ಲಿಲ್ಲ ಸ್ವಾರ್ಥ
ನಮ್ಮ ಭಾಷೆಯಗೋಸ್ಕರವೊಂದೇ ನಮ್ಮ ಸ್ವಾರ್ಥ!..
ಎನ್ನಡ ಅಂದರೂ ಸಿಟ್ಟು ಬರುವುದಿಲ್ಲ
ಎಕ್ಕಡ ಅಂದರೂ ಸಿಟ್ಟು ಬರುವುದಿಲ್ಲ
ಆದರೆ ಕನ್ನಡ ಅನ್ನದಿದ್ದರೆ ಮಾತ್ರ ಸಿಟ್ಟು ಬರುವುದು
ಅದು ಕೇವಲ ಕನ್ನಡಾಭಿಮಾನ!...
"ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು"