"ನನ್ನ ಕಾಳಜಿಯನ್ನು ಸದಾ ಮಾಡುವೆ
ನೀನೇನು ನನ್ನ ತಾಯಿಯೇ?
ತಪ್ಪು ದಾರಿ ಹಿಡಿದಾಗ ಬುದ್ಧಿ ಹೇಳುವೆ
ನೀನೇನು ನನ್ನ ತಂದೆಯೇ?
ನನ್ನ ವಿದ್ಯಾಭ್ಯಾಸದ ಬಗ್ಗೆ ವಿಚಾರಿಸುವ
ನೀನೇನು ನನ್ನ ಗುರುವೇ? ನನ್ನ ಜೊತೆ ಜಗಳವಾಡುವವರ ಜೊತೆ ಜಗಳವಾಡುವೆ
ನೀನೇನು ನನ್ನ ಬಾಡಿ ಗಾರ್ಡ್?
ದಾರಿ ಕಾಣದಿದ್ದಾಗ ದಾರಿ ತೋರುವೆ
ನೀನೇನು ನನ್ನ ಗೂಗಲ್ ಮ್ಯಾಪ್?
ನನ್ನನ್ನು ನಾನು ನಂಬುವುದಕ್ಕಿಂತ ಹೆಚ್ಚು
ನಿನ್ನನ್ನು ನಂಬುವಂತೆ ಮಾಡಿರುವೆ!
ನೀನು ಹೆಸರಿಗಷ್ಟೇ ನೀನು!
ನೀನು ಆಗದೇ ಇರುವ ಬಂಧವಿಲ್ಲ!
ನೀನು ಮಾಡದೇ ಇರುವ ಸಹಾಯವಿಲ್ಲ!
ನಿನ್ನ ಋಣವನ್ನು ಮೀರಿದ ಋಣವು ಇನ್ನೊಂದಿಲ್ಲ!
ನನ್ನ ನಿನ್ನ ಸಂಬಂಧವೇ ಗೆಳೆತನ!
ಈ ಹೆಸರಿಗೆ ಯಾರು ತರಬೇಡಿ ಕಳಂಕತನ!
ಹಳೆಯದಾದಷ್ಟು ಹೊಳೆಯುವುದು ನಮ್ಮ ಗೆಳೆತನ!"