"ನಿನ್ನ ಹೊಸ ಉಡುಗೆ, ನನಗೆ ಹೊಸ ಕೊಡುಗೆ!
ನಿನ್ನ ಕೇಶ ಹರಡಿದೆ, ನನ್ನ ಮನವು ಕದಡಿದೆ!
ನಿನ್ನ ತುಂಟ ನಗುವು, ನನಗೆ ಇಂಪಾದ ನಾದವು!
ನಿನ್ನ ಅಪರೂಪದ ಮಾತುಗಳು, ನನ್ನ ಕಿವಿಗೆ ಮಧುರವಾದ ಕವಿತೆಗಳು!
ನಿನ್ನ ಗಾಂಭೀರ್ಯದ ನೋಟ, ನನ್ನ ಕಣ್ಣಿಗೆ ಸುಂದರವಾದ ಹೂದೋಟ!
ನಿನ್ನ ಪ್ರೌಡ ವಿಚಾರಗಳು, ನನ್ನಲಿ ಬಿತ್ತಿದಂತಾಗುತ್ತಿದೆ ಭಾವನೆಗಳಂಬ ಮರಗಳು!
ನಿನ್ನ ಸಮಗ್ರ ಕಾಂತಿ, ದೊರೆತಂತಾಗುತ್ತಿದೆ ನನ್ನ ಕಲ್ಪನೆಗೆ ಶಾಂತಿ!!!"