An Approach..!
"ಕೆಲವರು ನಿನ್ನ ನಗುವನ್ನು ನೋಡಿ ಪ್ರೀತಿಸಿದರು,
ನಾನು ಕೂಡ ಆದರೆ ನಿನ್ನ ಮನದಾಳದ ನಗುವ ನೋಡಿ!"
"ಕೆಲವರು ನಿನ್ನ ಧ್ವನಿಯನ್ನು ಕೇಳಿ ಪ್ರೀತಿಸಿದರು,
ನಾನು ಕೂಡ ಆದರೆ ನಿನ್ನ ಅಂತರಾಳದ ಧ್ವನಿಯನ್ನು ಕೇಳಿ!"
"ಕೆಲವರು ನಿನ್ನ ಸೌಂದರ್ಯವನ್ನು ನೋಡಿ ಪ್ರೀತಿಸಿದರು,
ನಾನು ಕೂಡ ಆದರೆ ನಿನ್ನ ಶಾಂತತೆಯ ಸೌಂದರ್ಯವನ್ನು ನೋಡಿ!"
"ಉಳಿದವರೆಲ್ಲರೂ ನಿನ್ನನ್ನು ನೋಡುವಂತೆ ನಾನು ನೋಡಿದೆ,
ಅದರ ಜೊತೆಯಲಿ ಅವರಾರೂ ನೋಡದಿರುವ ರೀತಿಯಲ್ಲೂ ನಾ ನಿನ್ನ ನೋಡಿದೆ!"
ಅದೇ ನಾನು ಮಾಡಿದ ತಪ್ಪು
ಗೊತ್ತಾಯಿತೇ ಓ ನನ್ನ ಪ್ರಿಯೆ..!"
__&&&&___&&&&&_______&&&&&______&&&
A Proposal..!
"ಒಂದು ದಿನ ನನ್ನ ಕಣ್ಣಿಗೆ ಬಿತ್ತು ನಿನ್ನ ಕಣ್ಣುಗಳು!
ಹುಚ್ಚನ ತರಹ ಗೀಚಿದೇನು ಒಂದೆರಡು ಸಾಲುಗಳು!
ಅವುಗಳೇ ಆದವು ಮನ ಗೆಲ್ಲುವ ಕವಿತೆಗಳು!
ತಿಳಿಯದಾಗಿದೆ ಯಾರಿಗೆ ತಿಳಿಸಲು ನನ್ನ ಧನ್ಯವಾದಗಳು!
ನಿನ್ನ ಕಣ್ಣುಗಳಿಗೋ?!
ನನ್ನ ಕಣ್ಣುಗಳಿಗೋ?!
ಅಥವಾ ನನ್ನ ಭಾವನೆಗಳಿಗೋ?!
ಉರುಳಿ ಹೋಗುತ್ತಿವೆ ನನ್ನ ಜೀವನದ ಪುಟಗಳು!
ನೀನಾಗುತ್ತೀಯಾ ಆ ಪುಟಗಳಿಗೆ ಲೇಖಕಿ?!
ತುಂಬಿಸಲು ಆ ಪುಟಗಳಲಿ ನಿನ್ನ ಪದಗಳು..!"
~ N@•M•Am!